ಕೆಲವೊಂದು ಕೆಲಸಗಳಿಗೆ ಪೀಠಿಕೆ ಇರ್ಬೇಕಾಗುತ್ತೆ, ಮತ್ತೆ ಕೆಲವಕ್ಕೆ ಮುಖಕ್ಕಿಂತ ಮೂಗುತಿ ಭಾರ ಅನ್ನೋ ತರಹ ಪೀಠಿಕೆಯ ತೂಕ ಜಾಸ್ತಿ ಆಗ್ಬಿಡತ್ತೆ. ಈ ಬ್ಲಾಗ್ ಶುರು ಮಾಡ್ಲಿಕ್ಕೆ ಪೀಠಿಕೆ ಏನೂ ಇಲ್ಲ, ಆದರೆ ಶೀರ್ಷಿಕೆಗೆ ಪೀಠಿಕೆ ಇದೆ, ಅದು ಈ ಕೆಳಗಿನ ಪದ್ಯ, ವರ್ಷಕ್ಕು ಹಿಂದೆ ಫ಼ೇಸ್ಬುಕ್ನಲ್ಲಿ ಸುಮ್ಮನೆ ತಮಾಷೆಗೆಂದು ಬರೆದ ಪದ್ಯ.
***
ತಿಳಿದವರು ತಿಳಿಯದವರಿಗೆ ತಿಳಿಯುವಂತೆ ತಿಳಿಸಿದರೆ,
ತಿಳಿಯದವರು ತಿಳಿದಶ್ಟು ತಿಳಿದುಕೊಳ್ಳಬಹುದು|
ತಿಳಿಯದವರು ತಿಳಿದವರಿಗೆ ’ತಿಳಿಯದಂತೆಯೇ’ ತಿಳಿಸಿದರೆ,
ತಿಳಿದವರೂ ತಿಳಿಯುವುದಿನ್ನೂಯಿದೆಯೆಂದು ತಿಳಿಯಬಹುದು|
ತಿಳಿದವರು ಕೆಲವೊಮ್ಮೆ ತಿಳಿಯದಂತಿದ್ದರೆ ಶುದ್ಧ ಸ್ಫಟಿಕ,
ತಿಳಿಯದವರು ಹಲವೊಮ್ಮೆ ತಿಳಿಯಲೆತ್ನಿಸಿದರೆ ಬಲು ತವಕ,
ಅಳಿದುಳಿದವರು ತಿಳಿಯದ್ದನ್ನು ತಿಳಿಹೇಳಲು ಹೋದರೆ...
ನನ್ನಮೇಲೇ ನನಗೆ ಮರುಕ!
***
ನಾಲಗೆಗೆ ಪ್ರಶ್ನೆಗಳು ಏನೇಬರಲಿ
ಮನದಲಿ ಮಾಸದ ವಿಶ್ವಾಸವಿರಲಿ!
The "eye" inside us is greater than the "I" you see!
- ಅನಿಲ್
Anil (un-ill)
No comments:
Post a Comment