Tuesday, January 19, 2016

DVG's interview by GPR

A rare video is circulating on Whatsapp, an interview of DVG by GPR. The audio is a bit difficult to catch, hence this attempt to pen down the conversation. There is a great message in this interview.




(I am not sure about ** ones.)

GPR ತಾವು ಬರೆಯೋಕ್ ಶುರು ಮಾಡಿದ್ದು ಯಾಕೇ ಅಂತ?

DVG ನನ್ನ ಮನಸ್ಸಿನಲ್ಲಿ ಆದ ಸಂತೋಷವನ್ನ, ನನಗೆ ಬೇಕಾದವರ ಜೊತೆಯಲ್ಲಿ ಹಂಚಿಕೊಂಡ್ರೇ...

GPR ಹಂಚಿಕೊಂಡ್ರೆ?

DVG ಇಮ್ಮಡಿ ಆಗತ್ತೆ ಆ ಸಂತೋಷ

GPR ನಮ್ಮ ಜನ ನೆಮ್ಮದಿಯಿಂದ ಸುಖವಾಗಿ ಬದುಕ ಬೇಕಾದ್ರೆ ಏನು ಮಾಡ್ಬೇಕು?

DVG ಸುಖ  ಅಂಬೋದು, ಒಂದು ಕ್ಷಣದ ವಿಷಯ ಅಲ್ಲ, ಒಂದು ಕಾಲ ವಿಸ್ತಾರದ ವಿಷಯ.

GPR ನಿರಂತರ

DVG ಹೌದು, ಅದು point of time ಅಲ್ಲ, period of time
ಖಂಡಿತವಾಗಿ ಪ್ರತಿ ಮನುಷ್ಯನೂ ಶ್ರಮ ಪಡ್ಬೇಕಾಗುತ್ತೆ.
ಈ ಶ್ರಮದಲ್ಲಿ ಒಂದು ನೀತಿ ಇಟ್ಕೋಬೇಕು.
ಮೊದಲನೆಯದು: ಸತ್ಯ, ಶೋಧನೆಯ ಸತ್ಯ.
ಎಷ್ಟೋ ವಿಷಯಗಳನ್ನ ನಮಗೆ ಸತ್ಯ ಅಂತ ಹೇಳ್ತಾರೆ, ನಾವು ಅದನ್ನ ಶೋಧಸಬೇಕು
ಎರಡನಯದು, ಸತ್ಯ ಪ್ರಯೋಗದಲ್ಲಿ ಯುಕ್ತಾ-ಯುಕ್ತದ ವಿವೇಕ.
ಈ ಎರಡಕ್ಕೂ ಮೂಲವಾದದ್ದು ಸೌಜನ್ಯ
ಈ ಮೂರು  ಇಟ್ಕೊಂಡು ದೇಶದ ಕೆಲಸಗಳನ್ನ ನಡೆಸಿದರೇ ಸುಭೀಕ್ಷೆ ಉಂಟಾಗ್ತದೆ, ಸ್ವ-ಇಚ್ಛೆ (**) ಉಂಟಾಗ್ತದೆ, ಶಾಂತಿ ಉಂಟಾಗ್ತದೆ.

GPR ನಮ್ಮ ದೇಶದ ಉದ್ಧಾರ ಕಾರ್ಯದಲ್ಲಿ ಯುವಕರ ಪಾತ್ರವೇನು ಸರ್?

DVG ಯುವಕರದೇ ದೊಡ್ಡ ಪಾತ್ರ. ಗಾಂಧಿಯವರ ವರೆಗೂ, ದಾದಬಾಯಿ ನವರೋಜಿ ಅವರ ಕಾಲದಿಂದ, ಕೆಲವು ಉದ್ದೇಶಗಳನ್ನ, ಕೆಲವು ಧ್ಯೇಯಗಳನ್ನ ಎತ್ತಿ ಹಿಡಿದ್ರು. ಅವುಗಳನ್ನ ಮುಂದಕ್ಕೆ ತೊಗೊಂಡು ಹೋಗೋ ಅಂತ ಕೆಲಸ ಯುವಕರದ್ದು. ಗಾಂಧಿಯವರ ಕಾಲದಲ್ಲಿ ಸ್ವಾತಂತ್ರ ಸಂಪಾದನೆಗೆ ಹ್ಯಾಗೆ ಯುವಕರು ಸಾವಿರ ಸಾವಿರವಾಗಿ ಬಂದರೋ, ಆ ಸ್ವಾತಂತ್ರನ ಸಂರಕ್ಷಣೆ ಮಾಡಿ ಅದರಿಂದ ಪ್ರಯೋಜನ ಕೂಡ ಮಾಡೊ ಕೆಲಸಕ್ಕೆ ಹತ್ತುಸಾವಿರ-ಹತ್ತುಸಾವಿರವಾಗಿ ಯುವಕರು ಬರಬೇಕು, ಆದರೇ ಸತ್ಯದಲ್ಲಿ ಪ್ರೀತಿ ಇರತಕ್ಕವರಾಗಿರ್ಬೇಕು, ವಿಚಾರದಲ್ಲಿ ಅಭ್ಯಾಸ ಇರತಕ್ಕವರಾಗಿರ್ಬೇಕು, ಸೌಜನ್ಯದಲ್ಲಿ ನಂಬಿಕೆ ಇರತಕ್ಕವರಾಗಿರ್ಬೇಕು, ಇದೇ ನನ್ನ, ಯುವಕರಲ್ಲಿ, ಪ್ರಾರ್ಥನೆ
ಇನ್ನೇನಾದ್ರೂ ಉಂಟಾ ರಾಜರತ್ತ್ನಂ?

GPR ಎ, ಇನ್ನೇನು  ಕೇಳ್ಬೇಕಾದ್ದಿಲ್ಲ ಸರ್, ತಮ್ಮ ಅಶೀರ್ವಾದ ನಮ್ಮೇಲಿರ್ಬೇಕು

DVG ಸರಿ... ಸಂತೋಷನಪ್ಪ...  ಸಕಲಂ ಭದ್ರಮಸ್ತಮವಾಹ! (**)

Friday, January 15, 2016

Aakaasha Bhoomigala - translation

Recently I was searching for a Kannada devotional song to sing at our community event and came across it in youtube. A lot of folks who love this song have asked for English translation. Here is an attempt at that.

Song: Aakasha Bhoomigala
Singer: Dr. Rajkumar
Music: Upendrakumar
Lyricist: Chitnalli Udayashankar

Note: I have changed literal meaning to implied meaning in a very few places. For example, "roma-romadi" literally means "every hair strand", but colloquially, and more importantly, poetically used to imply "every atom in the body" or "the whole body".

***
(ಆಶ್ಚರ್ಯಭರಿತವಾದ/ಮಂತ್ರಮುಗ್ಧವಾದ ಮಾತುಗಳು; shell-shocked/mesmerized monologue)
ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೊ!
jagada shaktigaLella oMdAgi niMtito!
(Have all the forces in the world come together and standing!)

ಜಗವೆಲ್ಲ ಆಕ್ರಮಿಸಿ ಈ ಆಕಾರ ಬಂದಿತೊ!
jagavella Akramisi I AkAra baMdito!
(Did this form take shape by engulfing the entire world!)

ಕರಿಮುಗಿಲೆ ಕೇಶವೊ!
karimugile kEshavo!
(Are dark clouds the hair!)

ಸೂರ್ಯ-ಚಂದ್ರರೆ ನಯನಗಳೊ!
sUrya-chaMdrare nayanagaLo!
(Are the Sun and the Moon (your) eyes!)

ಸುಳಿವ ಮಿಂಚುಗಳೇ ನಗೆಯೊ!
suLiva miMchugaLE nageyo!
(Are flashes of lighting smiles!)

ಸಿಡಿಲು-ಗುಡುಗುಗಳೆಲ್ಲ ನೀನಾಡೊ ನುಡಿಯೊ!
siDilu-guDugugaLella nInADo nuDiyo!
(Did rumbling thunders become your speech!)

ಮೇರು ಪರ್ವತವೇ ನೀ ಹಿಡಿದ ಗದೆಯೊ!
mEru parvatavE nI hiDida gadeyo!
(Did mount Meru become the mace you are holding!)

ಪಾದಕಮಲಗಳೆರಡೂ ಪಾತಾಳದಲ್ಲಿದೆಯೊ!
pAdakamalagaLeraDU pAtALadallideyo!
(Are (your) Lotus feet at the depth of the abyss!)

ಅಂಜನಾತನಯ!
aMjanAtanaya!
(O the Son of Anjana)

ವೀರಾಂಜನೇಯ!
vIrAMjanEya!
(O the great warrior Anjaneya)

ಮಾರುತಿರಾಯ!
mArutirAya!
(O the king of winds)
|
(pallavi; Root verse/stanza)
|
ಆಕಾಶ-ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು!
AkAsha-bhUmigaLa oMdu mADi niMta ninna I AkAravEnu!
(What is this form of yours uniting the Heaven and Earth)
ಕಣ್ಣುಗಳ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು!
kaNNugaLa kOraisuva kAMti chelluva I bhavya rUpavEnu!
(What is this eyes-piercing radiance emanating from your majestic body)
ಊ ಊ ಊ
Oo Oo Oo
ಆಕಾಶ-ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು!
AkAsha-bhUmigaLa oMdu mADi niMta ninna I AkAravEnu!
(What is this form of yours uniting the Heaven and Earth!)
|
(ಚರಣ ೧; First stanza)
|
ನೋಡುವ ಬಗೆ ಹೇಗೆ ನಿನ್ನ ಬೇಡುವ ಬಗೆ ಹೇಗೆ ನಿನ್ನ,
nODuva bage hEge ninna bEDuva bage hEge ninna,
(How shall I see you! How shall I pray to you!)
ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ!
pAda huDukalAre hanuma mogava kANalAre!
(Can't see your feet, Hanuma, can't look at your face!)
(repeat the above lines one more time)
ಕೋಟಿ ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು,
kOTi kaNNu sAladayya ninna rUpa tuMbikoLalu,
(A billion eyes are not enough to capture your majestic form)
ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು!
hEge ninna kANalayya hIge nillalu!
(How can I see you when you stand like this!)
ನಿಂತ ರೀತಿಯೊ, ತನುವ ಕಾಂತಿಯೊ!
niMta rItiyo, tanuva kAMtiyo!
(Is it the way (you are) standing, or is it that radiating body-glow!)
ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ,
uriva sUrya haNate dIpadaMte kANutiralu hIge,
(When burning Sun is looking like a small tea-lamp,)
ಆಕಾಶ-ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು!
AkAsha-bhUmigaLa oMdu mADi niMta ninna I AkAravEnu!
(What is this form of yours uniting the Heaven and Earth!)
|
(ಚರಣ ೨; Second stanza)
|
ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು,
ninna usira bisige hedari nadigaLAviyAgutiralu,
(When rivers are evaporating with fear to the warm breath of yours,)
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು!
divya rUpa kaMDa girigaLella naDugutiralu!
(When mountains are rumbling witnessing your divine majestic form,)
(repeat the above lines one more time)
ನಿನ್ನ ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು,
ninna bhAra tALeneMdu bhUmi kusidu hOgutiralu,
(When Earth is sinking unable to bear your weight,)
ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು!
elli nAnu nillalayya ninna nODalu!
(Where shall I stand to see you!)
ರೋಮ-ರೋಮದಿ ರಾಮನಾಮವು; ರೋಮ-ರೋಮದಿ ರಾಮನಾಮವು
rOma-rOmadi rAmanAmavu; rOma-rOmadi rAmanAmavu
(Your) (Whole body is chanting Rama's name!)
ಶಂಖನಾದ-ತಾಳವಾದ್ಯ; ಶಂಖನಾದ-ತಾಳವಾದ್ಯ!
shaMKanAda-tALavAdya; shaMKanAda-tALavAdya!
(Music from conch-shells and rhythmic drums!)
ದಶ-ದಿಕ್ಕನು ಮೊಳಗುತಿರಲು!
dasha-dikkanu moLagutiralu!
(resonating in ten directions!)
(directions - n,ne,e,se,s,sw,w,nw,infinite sky,infinite abyss)

ಆಕಾಶ-ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು! (೨)
AkAsha-bhUmigaLa oMdu mADi niMta ninna I AkAravEnu! (2)
(What is this form of yours uniting the Heaven and Earth)
ಕಣ್ಣುಗಳ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು!
kaNNugaLa kOraisuva kAMti chelluva I bhavya rUpavEnu!
(What is this eyes-piercing radiance emanating from your majestic body)
ಊ ಊ ಊ
Oo Oo Oo
ಆಕಾಶ-ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು!
AkAsha-bhUmigaLa oMdu mADi niMta ninna I AkAravEnu!
(What is this form of yours uniting the Heaven and Earth)
ನಿನ್ನ ಈ ಆಕಾರವೇನು!
ninna I AkAravEnu!
(What is this form of yours)
ನಿನ್ನ ಈ ಆಕಾರವೇನು!
ninna I AkAravEnu!
(What is this form of yours)